ಅಗ್ರಿಗೇಟ್ಸ್‌

ಹೆಚ್ಚು ಸುರಕ್ಷತೆ, ಹೆಚ್ಚು ಆರಾಮದಾಯಕತೆ, ಹೆಚ್ಚು ಟ್ರಿಪ್‌ಗಳು, ಹೆಚ್ಚು ಲಾಭ.

ಮಹೀಂದ್ರಾ BLAZO X ಭಾರತದ ಅತ್ಯಂತ ಆರಾಮದಾಯಕ ಟ್ರಕ್‌ಗಳಲ್ಲಿ ಒಂದಾಗಿರುತ್ತದೆ. ಚಾಲಕರು ಭಾರತೀಯ ಸಾರಿಗೆಯ ವಾಸ್ತವಿಕ ಗಾಲಿಗಳಾಗಿರುತ್ತಾರೆ ಹಾಗೂ ಅವರು ತಮ್ಮ ಅರ್ಧದಷ್ಟು ಜೀವನವನ್ನು ಕ್ಯಾಬಿನ್‌ನಲ್ಲಿ ಕಳೆಯುತ್ತಾರೆ ಎಂಬ ಜ್ಞಾನಗಳೊಂದಿಗೆ ಇದನ್ನು ನಿರ್ಮಿಸಲಾಗಿದೆ. ಅದಕ್ಕಾಗಿಯೇ ಈ ಟ್ರಕ್‌ ಅನ್ನು ಆರಾಮದಾಯಕ ಹಾಗೂ ಸುರಕ್ಷಿತಗೊಳಿಸಲು ಇವುಗಳಲ್ಲಿ ಹಲವಾರು ವೈಶಿಷ್ಟ್ಯಗಳಿವೆ. 4-ಪಾಯಿಂಟ್‌ ಸಸ್ಪೆಂಡೆಡ್‌ನಂತಹ ಕ್ಯಾಬಿನ್ ನಿಜವಾಗಿಯೂ ಚಾಲನೆಯ ಆರಾಮದಾಯಕತೆಯನ್ನು ಹೆಚ್ಚಿಸುತ್ತದೆ. ಕ್ಯಾಬಿನ್‌ ಒಳಗಿನ ಪರಿಶ್ರಮವನ್ನು ಕಡಿಮೆಗೊಳಿಸಲು ಕಂಟ್ರೋಲ್‌ಗಳನ್ನು ದಕ್ಷತಾಶಾಸ್ತ್ರೀಯ ರೀತಿಯಲ್ಲಿ ನೆಲೆಗೊಳಿಸಲಾಗಿದೆ.

Image

ಟಿಲ್ಟ್‌ ಹಾಗೂ ಟೆಲಿಸ್ಕೋಪಿಕ್‌ ಸ್ಟೀರಿಂಗ್‌ನಿಂದ ಚಾಲಕರು ಅವರ ಅನುಕೂಲಕ್ಕೆ ತಕ್ಕಂತೆ ಸ್ಟೀರಿಂಗ್‌ ಅನ್ನು ಹೊಂದಿಸಬಹುದು. ವಿಶಾಲವಾದ ವಿಂಡ್‌ಶೀಲ್ಡ್‌ ಹಾಗೂ ದೊಡ್ಡ ರಿಯರ್‌ ವ್ಯೂ ಮಿರರ್‌ ಉನ್ನತ ವಿಸಿಬಿಲಿಟಿಯನ್ನು ನೀಡುತ್ತದೆ. ಹಾಗೂ ಆ್ಯಂಟಿ-ಲಾಕ್‌ ಬ್ರೇಕಿಂಗ್‌ ಸಿಸ್ಟಮ್‌ ಅಧಿಕ ವೇಗದಲ್ಲೂ ಉನ್ನತ ಬ್ರೇಕಿಂಗ್‌ ನಿಯಂತ್ರಣವನ್ನು ಖಚಿತಪಡಿಸುತ್ತದೆ.ಮತ್ತೊಂದು ಶಬ್ದದಲ್ಲಿ ಹೇಳುವುದಾದರೆ, ಇದು ಒಂದು ಸುರಕ್ಷಿತ, ಆಯಾಸರಹಿತ ಚಾಲನೆಗಾಗಿ ನಿರ್ಮಿಸಲಾದ ಟ್ರಕ್‌ ಆಗಿರುತ್ತದೆ ಅಂದರೆ ಚಾಲಕರ ಮೂಲಕ ಕಡಿಮೆ ನಿಲುಗಡೆ, ಕಡಿಮೆ ಸಮಯದಲ್ಲಿ ಹೆಚ್ಚಿನ ದೂರವನ್ನು ಕ್ರಮಿಸುವುದು ಹಾಗೂ ಉತ್ತಮ ಟರ್ನ್‌ಅರೌಂಡ್‌ ಸಮಯ.

ಹೊಸ ಮಹೀಂದ್ರಾ BLAZO X ರೇಂಜ್‌ನಲ್ಲಿ ಡ್ರೈವರ್‌ಗೆ ವಾಸ್ತವಿಕ ಸಮಯದಲ್ಲಿ ವಾಹನದ ಬಗ್ಗೆ ಮಹತ್ವಫೂರ್ಣ ಮಾಹಿತಿಯನ್ನು ಒದಗಿಸುವ ಕಾರ್‌ನಂತಹ ಡ್ರೈವರ್‌ ಇನ್‌ಫಾರ್ಮೇಷನ್‌ ಸಿಸ್ಟಮ [DIS] ಇದೆ. ಎಂಜಿನ್‌ r/min, ತಾಪಮಾನ, ವೇಗ ಹಾಗೂ ಇಂಧನದ ಮಟ್ಟಗಳ ಹೊರತಾಗಿ, ಇದು ಬ್ರೇಕ್‌ ಪ್ರೆಶರ್‌, ಟ್ರಿಪ್‌ ಕಿ.ಮೀ., ಪ್ರತಿ ಕಿ.ಮೀ.ಗೆ ಡೀಸೆಲ್‌ ಬಳಕೆ, ಬ್ಯಾಟರಿ ವೋಲ್ಟೇಜ್‌, ಸರ್ವಿಸ್‌ ರಿಮೈಂಡರ್‌ ಹಾಗೂ ಇತರ ಪ್ರಮುಖ ವಿವರಗಳನ್ನು ಹೊಂದಿದೆ.

ಉತ್ತಮ ಪರ್ಫಾರ್ಮೆನ್ಸ್‌ಗಾಗಿ, ಮೊದಲು ಉತ್ತಮ ಬಿಲ್ಟ್‌ ಇರಬೇಕಾಗುತ್ತದೆ .

ಚಕನ್‌ನಲ್ಲಿರುವ ಗ್ರೀನ್‌ಫಿಲ್ಡ್‌ ಪ್ಲ್ಯಾಂಟ್‌, ಭಾರತದಲ್ಲಿನ ಅತ್ಯಾಧುನಿಕ ಉತ್ಪಾದನಾ ಘಟಕಗಳಲ್ಲಿ ಒಂದಾಗಿದ್ದು, ಅಲ್ಲಿ ಮಹೀಂದ್ರಾ ಟ್ರಕ್‌ಗಳನ್ನು ರಚಿಸಲಾಗುತ್ತದೆ. ಬೃಹತ್‌ ಪ್ರಮಾಣದಲ್ಲಿರುವ ಚಕನ್‌ ಪ್ಲ್ಯಾಂಟ್‌ ವಿವರಗಳ ಗಮನಕ್ಕಾಗಿ ಪ್ರಸಿದ್ಧವಾಗಿರುತ್ತದೆ. ವಿಶ್ವಾಸಾರ್ಹತೆಯ ಉನ್ನತ ಮಾನಕವನ್ನು ಖಚಿತಪಡಿಸಲು ಪ್ರತಿಯೊಂದು ವಾಹನವನ್ನು ರೊಬೋಟಿಕ್‌ ನಿಖರತೆ ಹಾಗೂ ಅತ್ಯಂತ ಕಾಳಜಿಯಿಂದ ಒಟ್ಟಿಗೆ ಇಡಲಾಗುತ್ತದೆ. ಯುವ, ಉತ್ಸಾಹಿ ಹಾಗೂ ಅತ್ಯುತ್ತಮ ತರಬೇತಿ ಪಡೆದ ಟೆಕ್ನೀಶಿಯನ್‌ಗಳ ಸಮೂಹವು ಈ ಪ್ಲ್ಯಾಂಟ್‌ನಿಂದ ಹೊರಬರುವ ವಾಹನಗಳ ಗುಣಮಟ್ಟವನ್ನು ಖಚಿತಪಡಿಸುತ್ತದೆ. ಅದರ ಅತ್ಯಾಧುನಿಕ ಟೆಕ್ನಾಲಾಜಿ ಹಾಗೂ ಸುಸ್ಥಿರ ಆಚರಣೆಗಳು ಇದನ್ನು ಜಗತ್ತಿಗೆ ಉತ್ತಮ ಫರ್ಫಾರ್ಮೆನ್ಸ್‌ನ ವಾಹನಗಳನ್ನು ನೀಡಲು ಸಿದ್ಧವಾಗಿರುವ ಪ್ಲ್ಯಾಂಟ್‌ ಅನ್ನಾಗಿ ಮಾಡಿದೆ.

ನಾವು ನಮ್ಮ ಟ್ರಕ್‌ಗಳನ್ನು ನಿರ್ಮಿಸುವಾಗ ಅತ್ಯಂತ ಅನಿರೀಕ್ಷಿತ ಪರಿಸ್ಥಿತಿಗಳನ್ನು ನಿರೀಕ್ಷಿಸಿದ್ದೇವೆ. ಅದಕ್ಕಾಗಿಯೇ ಈ ಟ್ರಕ್‌ಗಳು ಸಾಲಿಡ್‌ ಪರ್ಫಾರ್ಮೆನ್ಸ್‌ ಅನ್ನು ಸ್ಥಿರವಾಗಿ ನೀಡುವ ಅನೇಕ ವೈಶಿಷ್ಟ್ಯಗಳನ್ನು ಹೊಂದಿವೆ. TAG/PUSHER LIFT AXLE ನಂತೆ ಅದು ಯಾವುದೇ ಲೋಡ್‌ ಆಗಿರಲಿ, ಯಾವುದೇ ರೋಡ್‌ ಆಗಿರಲಿ ಟೈರ್‌ಗಳ ಸವೆತವನ್ನು ಕಡಿಮೆ ಮಾಡುತ್ತದೆ. ವಿಭಿನ್ನ ಲೋಡ್‌ ಹಾಗೂ ಭೂಪ್ರದೇಶದ ಪರಿಸ್ಥಿತಿಗಳಲ್ಲಿ ನಮ್ಮ ಕೆಲಸಗಳಿಗೆ ಸಹಾಯ ಮಾಡಲು ಒಂದು ಬೋಗಿ ಸಸ್ಪೆನ್ಶನ್‌ [A BOGIE SUSPENSION]. ಸುರಕ್ಷಿತ ಹಾಗೂ ಅನಾಯಾಸ ಚಾಲನೆಯನ್ನು ಖಚಿತಪಡಿಸಿಕೊಳ್ಳಲು 395 mm ವ್ಯಾಸದೊಂದಿಗಿನ ಕ್ಲಚ್‌ ಹಾಗೂ ಹೆವಿಡ್ಯೂಟಿ ಗೇರ್‌ ಬಾಕ್ಸ್‌. ಒಂದು ಸದೃಢವಾದ ಚೆಸ್ಸಿ, 10 ಬಾರ್‌ ಪ್ರೆಶರ್‌ನೊಂದಿಗೆ ವಿಸ್ವಾಸಾರ್ಹ S-cam ಏರ್‌ ಬ್ರೇಕ್‌ಗಳು ಹಾಗೂ ರಿಯರ್‌ ಲೀಫ್‌ ಸಸ್ಪೆನ್ಶನ್‌ ಈ ವಾಹನವನ್ನು ಅತ್ಯಂತ ಗಟ್ಟಿಮುಟ್ಟಾಗಿ ಹಾಗೂ ವಿಶ್ವಾಸಾರ್ಹವಾಗಿಸುತ್ತದೆ. ಹಲವು ವರ್ಷಗಳ ವರೆಗೆ ತೊಂದರೆ ರಹಿತ ಕಾರ್ಯಾಚರಣೆಗಳಿಗಾಗಿ ಹೆವಿ ಡ್ಯೂಟಿ ಫ್ರಂಟ್‌ ಆ್ಯಕ್ಸೆಲ್‌ ಅನ್ನು ಅಳವಡಿಸಲಾಗಿದೆ.

ಈ ಎಲ್ಲ ಅಗ್ರಿಗೇಟ್‌ಗಳ ವಿನ್ಯಾಸವು ಬಾಳಿಕೆ ಬರುವಂತಹದ್ದಾಗಿರುತ್ತದೆ, ಸ್ಥಿರವಾದ ಫರ್ಫಾರ್ಮೆನ್ಸ್‌ ನೀಡುತ್ತದೆ ಹಾಗೂ ಕನಿಷ್ಠ ಮೆಂಟೇನೆನ್ಸ್‌ನ ಅಗತ್ಯವಿರುತ್ತದೆ.

ಕಾರ್ಪೊರೇಟ್ ವಿಳಾಸ

ನೋಂದಾಯಿತ ಕಛೇರಿ

ಮಹೀಂದ್ರಾ ಆ್ಯಂಡ್‌ ಮಹೀಂದ್ರಾಮಹೀಂದ್ರಾ ಲಿ.

ಅಪೊಲೊ ಬಂದರ್, ಕೊಲಾಬಾ, ಮುಂಬೈ, ಮಹಾರಾಷ್ಟ್ರ 400001

ಪ್ರಧಾನ ಕಛೇರಿ

ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ ಡಿವಿಜನ್‌

ನಂ. 128/ಎ,ಸಾಂಘವಿ ಕಾಂಪೌಂಡ್‌, ಮುಂಬಯಿ-ಪುಣೆ ರೋಡ್‌, ಎನ್‌ಎಚ್‌-4,ಪಿಂಪ್ರಿ-ಚಿಂಚ್‌ವಾಡ್‌, ಪುಣೆ, ಮಹಾರಾಷ್ಟ್ರ 411019

ದೂರವಾಣಿ

1800 315 7799 (ಮಿಸ್ಡ್‌ ಕಾಲ್‌)
1800 200 3600 (ಟೋಲ್‌ ಫ್ರೀ)

ಇಮೇಲ್‌

[email protected]
[email protected]