8

ಮಹೀಂದ್ರಾ ಟ್ರಕ್‌ ಹಾಗೂ ಬಸ್‌ ಅದರ 'RISE'ನ ತತ್ವಕ್ಕೆ ಬದ್ಧರಾಗಿ ಭಾರತೀಯ ಟ್ರಕ್‌ ಚಾಲಕರ ಸಮುದಾಯದ ಮೇಲೆ ಗಮನ ಸೆಳೆಯಲು ಸಾರಥಿ ಅಭಿಯಾನವನ್ನು ಪರಿಚಯಿಸಿದೆ.ಈ ವಿಶಿಷ್ಟ ಸಿಎಸ್‌ಆರ್‌ ಯೋಜನೆಯು ಟ್ರಕ್‌ ಚಾಲಕರನ್ನು ಮಾತ್ರವಲ್ಲದೇ ಅವರ ಕುಟುಂಬಗಳಿಗೆ ಸಹ ಬೆಂಬಲವನ್ನು ನೀಡುತ್ತದೆ. ಸಾರಥಿ ಅಬಿಯಾನದ ಮೊದಲ ಹಂತವನ್ನು ಟ್ರಕ್‌ ಚಾಲಕರ ಹೆಣ್ಣುಮಕ್ಕಳಿಗಾಗಿ ಜನಪ್ರಿಯ ಹಾಗೂ ಹೃದಯಸ್ಪರ್ಶಿ ಸ್ಕಾಲರ್‌ಶಿಪ್‌ ಪ್ರೋಗ್ರಾಂನೊಂದಿಗೆ ಪ್ರಾರಂಭಿಸಲಾಯಿತು. ಇದರಲ್ಲಿ 10ನೇ ತರಗತಿಯನ್ನು ಪೂರ್ಣಗೊಳಿಸಿದ ಹಾಗೂ ಹೆಚ್ಚಿನ ಶಿಕ್ಷಣವನ್ನು ಪಡೆಯುತ್ತಿರುವ ಪ್ರತಿಭಾವಂತ ಅರ್ಜಿದಾರರಿಗೆ ರೂ.10,000 ಮೌಲ್ಯದ ಸ್ಕಾಲರ್‌ಶಿಪ್‌ಗಳನ್ನು ನೀಡಲಾಯಿತು. ಈ ಉಪಕ್ರಮವು ಕಷ್ಟದ ಸಂದರ್ಭಗಳ ಹೊರತಾಗಿಯು ತಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಿರುವ ಆ ಎಲ್ಲ ಟ್ರಕ್‌ ಚಾಲಕರನ್ನು ಗೌರವಿಸುವ ನಮ್ಮ ರೀತಿಯಾಗಿರುತ್ತದೆ. ಆದರೆ ಇದು ಆರಂಭ ಮಾತ್ರವಾಗಿರುತ್ತದೆ. ಸಾರಥಿ ಅಬಿಯಾನದೊಂದಿಗೆ ಈ ಪಯಣವನ್ನು ಮುಂದುವರೆಸುತ್ತಾ, ಟ್ರಕ್‌ ಚಾಲಕರನ್ನು ಕಾಳಜಿಯಿಂದ ನೋಡಿಕೊಳ್ಳುವ ನಮ್ಮ ಈ ಸಂಕಲ್ಪವನ್ನು ಈಡೇರಿಸುತ್ತೇವೆ.

7

ನಿರೀಕ್ಷೆಗಿಂತ ಉತ್ತಮ ಪ್ರದರ್ಶನ. ಇದು ಮಹೀಂದ್ರಾ ಆ್ಯಂಡ್‌ ಮಹೀಂದ್ರಾವನ್ನು ಹೊಸ ಯುಗಕ್ಕೆ ತರುವ ತತ್ವಶಾಸ್ತ್ರವಾಗಿರುತ್ತದೆ. ಭಾರತೀಯ ಸಾರಿಗೆಯು ಉತ್ಕೃಷ್ಟತೆಯ ಹೊಸ ಎತ್ತರಗಳನ್ನು ಅಳೆಯಲು ಸಹಾಯ ಮಾಡುವ ಯುಗವಾಗಿರುತ್ತದೆ. ಈ ತತ್ವಶಾಸ್ತ್ರದೊಂದಿಗೆ, ನಾವು ಮಹೀಂದ್ರಾ ಟ್ರಾನ್ಸ್‌ಪೋರ್ಟ್‌ ಎಕ್ಸಲೆನ್ಸ್‌ ಅವಾರ್ಡ್‌ಗಳನ್ನು ನಡೆಸಲು ಆರಂಭಿಸಿದ್ದೇವೆ. ಈ ಅವಾರ್ಡ್‌ಗಳು ಭಾರತೀಯ ಟ್ರಕಿಂಗ್‌ನಲ್ಲಿ ಬದಲಾವಣೆಯನ್ನು ತರುವತ್ತ ಕೊಡುಗೆ ನೀಡಿದವರಿಗೆ ಮೀಸಲಾಗಿವೆ ಹಾಗೂ ಅವರು ಉತ್ತಮ ಕಾರ್ಯಕ್ಷಮತೆ, ಶ್ರೇಷ್ಠತೆ, ನಾವೀನ್ಯ ಹಾಗೂ ಚೇಂಜ್‌ ಲೀಡರ್‌ಶಿಪ್‌ ಅನ್ನು ಗುರುತಿಸುತ್ತಾರೆ ಹಾಗೂ ಪುರಸ್ಕರಿಸುತ್ತಾರೆ. ಇದು ವರ್ಷದುದ್ದಕ್ಕೂ ಶ್ರೇಷ್ಠತೆ ಹಾಗೂ ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವ ವೇದಿಕೆಯಾಗಿರುತ್ತದೆ. ಹಾಗೂ ಸಮಗ್ರ ಉದ್ಯಮಕ್ಕೆ ಸ್ಫೂರ್ತಿ ನೀಡುವ ಮಾನದಂಡಗಳನ್ನು ನಿರ್ದಿಷ್ಟಪಡಿಸುತ್ತದೆ.  ಹೆಚ್ಚಿನ ಮಾಹಿತಿಗಾಗಿ ಮಹೀಂದ್ರಾ ಟ್ರಾನ್ಸ್‌ಪೋರ್ಟ್‌ ಎಕ್ಸಲೆನ್ಸ್‌ ಅವಾರ್ಡ್ಸ್‌ ವೆಬ್‌ಸೈಟ್‌ಗೆ ಭೇಟಿ ನೀಡಿ.

6

ಯುವಕರನ್ನು ಸಾರಿಗೆ ಉದ್ಯಮಕ್ಕೆ ಸೇರಿಕೊಳ್ಳಲು ಪ್ರೋತ್ಸಾಹಿಸುವ ಮೂಲಕ ಹಾಗೂ ನಂತರ ಅವರನ್ನು ಸಶಕ್ತಗೊಳಿಸುವ ಮೂಲಕ ಸಕಾರಾತ್ಮಕ ಬದಲಾವಣೆಯ ಏಜಂಟ್‌ ಆಗುವುದು ಮಹೀಂದ್ರಾ ಟ್ರಕ್‌ ಹಾಗೂ ಬಸ್‌ನ ಗುರಿಯಾಗಿದೆ. ಈ ಉದ್ದೇಶಗಳನ್ನು ಪೂರೈಸಲು ಯುವ ಸಾರಿಗೆ ಉದ್ಯಮಿಗಳಿಗಾಗಿ ನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮವಾದ MPOWER’, ಅನ್ನು ನಾವು ವಿನ್ಯಾಸಗೊಳಿಸಿದ್ದೇವೆ ಹಾಗೂ ಪ್ರವರ್ತಕರಾಗಿದ್ದೇವೆ. ಅವರು ಸ್ಪರ್ಧಾತ್ಮಕ ಉದ್ಯಮಕ್ಕಾಗಿ ಚೆನ್ನಾಗಿ ಸಿದ್ಧರಾಗಿರುವುದನ್ನು ಖಚಿತ ಪಡಿಸಿಕೊಳ್ಳುವ ಹಾಗೂ ಜೊತೆಯಲ್ಲಿ ಉತ್ಕೃಷ್ಟ ಪ್ರದರ್ಶನವನ್ನು ನೀಡುವುದಕ್ಕಾಗಿ ನಾವು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, ಅಹಮದಾಬಾದ್‌ (IIM-A),ಇಂಡಿಯನ್‌ ಮೆರಿಟೈಮ್‌ ಯುನಿವರ್ಸಿಟಿ (IMU) ಹಾಗೂ ಅನಂತರಾ ಸೊಲ್ಯೂಶನ್ಸ್‌ ಪ್ರೈವೇಟ್ ಲಿಮಿಟೆಡ್‌ನಂತಹ ನಮ್ಮ ಕ್ಷೇತ್ರದಲ್ಲಿ ಸರ್ವಶ್ರೇಷ್ಠ ಪ್ರತಿಷ್ಠಿತ ಸಂಸ್ಥೆಗಳನ್ನು ಜ್ಞಾನ ಪಾಲುದಾರರಾಗಿ ಮಾಡಿಕೊಂಡಿದ್ದೇವೆ.

5

ಇದು ಭಾರತೀಯ ಟ್ರಕಿಂಗ್‌ ಉದ್ಯಮದ ಅನುಭವಿಗಳನ್ನು [ಮೆಂಟರ್ಸ್‌] ಸಶಕ್ತಗೊಳಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಾಮೂಹಿಕ ಲರ್ನಿಂಗ್‌ ಪ್ರೋಗ್ರಾಂ ಆಗಿರುತ್ತದೆ. ಈ ವೇದಿಕೆಯಲ್ಲಿ ಉದ್ಯೋಗ ಜಗತ್ತಿನ ಅನುಭವಿಗಳು ಸಾರಿಗೆಯ ವಿಷಯದ ಬಗ್ಗೆ ಇತರ ಫ್ಲೀಟ್‌ ಮಾಲಿಕರು, ಅನುಭವಿ ವೃತ್ತಿಪರರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ ಹಾಗೂ IIM--A ಫೆಕಲ್ಟಿಯೊಂದಿಗೆ ಚರ್ಚಿಸುತ್ತಾರೆ ಹಾಗೂ ಮುಂದಿನ ಪೀಳಿಗೆ ಟ್ರಾನ್ಸ್‌ಪೋರ್ಟರ್‌ಗಳಿಗೆ ಮಾರ್ಗದರ್ಶನ ನೀಡುತ್ತಾರೆ

4

ವಾಸ್ತವವಾಗಿ ಪ್ರಯೋಗಿಸುವವರೆಗೆ ಕಲಿಕೆಯು ಪೂರ್ಣಗೊಳ್ಳುವುದಿಲ್ಲ ಎಂದು ಹೇಳುತ್ತಾರೆ. MPOWER ವಾರ್‌ ರೂಮ್‌ನ ಹಿಂದೆಯೂ ಇದೇ ವಿಚಾರವಿದೆ. ಈ ಪ್ರೋಗ್ರಾಂನ ಮೂಲಕ, ಭಾಗವಹಿಸುವವರು ತಮ್ಮ MPOWER ಕಲಿಕೆಯನ್ನು ಅವರು ಹೇಗೆ ಪ್ರಯೋಗಿಸಿದ್ದಾರೆ ಹಾಗೂ ತಮ್ಮ ಕುಟುಂಬದ ಟ್ರಾನ್ಸ್‌ಪೋರ್ಟ್‌ ಬಿಸಿನೆಸ್‌ ಅನ್ನು ಅಭಿವೃದ್ಧಿಪಡಿಸಿದ್ದಾರೆ ಎನ್ನುವುದನ್ನು ಪ್ರಸ್ತುತಪಡಿಸಬಹುದು. ಈ ಪೋಗ್ರಾಂ ಭಾಗವಹಿಸುವವರಿಗೆ ಪರಸ್ಪರರ ಅನುಭವಗಳಿಂದ ಕಲಿಯಲು ಹಾಗೂ ಪರಸ್ಪರ ಆಳವಾದ ಸಂಬಂಧವನ್ನು ನಿರ್ಮಿಸಲು ಅವಕಾಶವನ್ನು ನೀಡುತ್ತದೆ. IIM·A. ಸಹಭಾಗಿತ್ವದಲ್ಲಿ ಆಯೋಜಿಸಲಾಗುತ್ತದೆ . ಈವರೆಗೆ ವಾರ್‌ ರೂಮ್‌ 3 ಆವೃತ್ತಿಗಳನ್ನು ಹಾಗೂ ಸುಮಾರು 66 ಭಾಗೀದಾರರನ್ನು ಕಂಡಿದೆ

3

ಇದು ಮಹೀಂದ್ರಾದ ಅತ್ಯಾಧುನಿಕ ಚಕನ್‌ ಪ್ಲ್ಯಾಂಟ್‌ನ ವಿಶಿಷ್ಟ ಪ್ರವಾಸದ ಅವಕಾಶವನ್ನು ಗ್ರಾಹಕರಿಗೆ ನೀಡುವ ಉಪಕ್ರಮವಾಗಿರುತ್ತದೆ. ಹಾಗೆಯೇ ಅವರು ಸಂಪೂರ್ಣ ಟ್ರಕ್‌ ತಯಾರಿಕೆಯ ಪ್ರಕ್ರಿಯೆಗಳು, ವಾಸ್ತವವಾಗಿರುವ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣಕ್ಕೆ ಒಳಪಡುವ ಮಹೀಂದ್ರಾದ ಟ್ರಕ್‌ ಹಾಗೂ ಉತ್ತಮ ಕಾರ್ಯಕ್ಷಮತೆಯ ಯಂತ್ರಗಳ ಉತ್ಪಾದನೆಯನ್ನು ನೋಡಬಹುದು.

ಕಾರ್ಪೊರೇಟ್‌ ವಿಳಾಸ

ನೋಂದಾಯಿತ ಕಛೇರಿ

ಮಹೀಂದ್ರಾ ಆ್ಯಂಡ್‌ ಮಹೀಂದ್ರಾಮಹೀಂದ್ರಾ ಲಿ.

ಅಪೋಲೋ ಬಂದರ್‌ , ಕೊಲಬಾ, ಮುಂಬಯಿ, ಮಹಾರಾಷ್ಟ್ರ400001.

ಪ್ರಧಾನ ಕಛೇರಿ

ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ ಡಿವಿಜನ್‌

ನಂ. 128/ಎ,ಸಾಂಘವಿ ಕಾಂಪೌಂಡ್‌, ಮುಂಬಯಿ-ಪುಣೆ ರೋಡ್‌, ಎನ್‌ಎಚ್‌-4,ಪಿಂಪ್ರಿ-ಚಿಂಚ್‌ವಾಡ್‌, ಪುಣೆ, ಮಹಾರಾಷ್ಟ್ರ 411019

ದೂರವಾಣಿ

1800 315 7799 (ಮಿಸ್ಡ್‌ ಕಾಲ್‌)
1800 200 3600 (ಟೋಲ್‌ ಫ್ರೀ)

ಇಮೇಲ್‌

[email protected]
[email protected]