ಕ್ರೂಜಿಯೋ ಗ್ರಾಂಡೆ ಸ್ಕೂಲ್ ಬಸ್ BS6 - ವಿವರಣೆ

Aಸಂಪೂರ್ಣ ಹೊಸ ಮಹೀಂದ್ರಾ ಕ್ರೂಜಿಯೋ ಗ್ರಾಂಡೆ ತನ್ನ ವರ್ಗದಲ್ಲಿ ಅತ್ಯಂತ ಲಾಭದಾಯಕ ಬಸ್‌.

ಸುರಕ್ಷತೆ, ಅನುಕೂಲತೆ ಹಾಗೂ ಆರಾಮದಾಯಕತೆಯಲ್ಲಿ ಕ್ಲಾಸ್‌ ಟಾಪರ್‌.

ನಮ್ಮ ಅತ್ಯಮೂಲ್ಯವಾದ ಕಾರ್ಗೊವನ್ನು ಸುರಕ್ಷಿತ ಹಾಗೂ ಸಹಜವಾಗಿ ಇಟ್ಟುಕೊಳ್ಳುವುದು.

ವಿದ್ಯಾರ್ಥಿಗಳು ಅತ್ಯಂತ ಅಮೂಲ್ಯರಾಗಿರುತ್ತಾರೆ. ಹಾಗೂ ಅವರ ಸುರಕ್ಷತೆ ಹಾಗೂ ಆರಾಮದಾಯಕತೆಗಿಂತ ಮತ್ತೇನೂ ಮುಖ್ಯವಲ್ಲ. ಅದಕ್ಕಾಗಿಯೇ ಮಹೀಂದ್ರಾ ಕ್ರೂಜಿಯೋ ಗ್ರಾಂಡೆ ಸ್ಕೂಲ್‌ ಬಸ್‌ ಅನ್ನು ವಿದ್ಯಾರ್ಥಿಗಳು, ಅವರ ಆಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಇದು ಮಹೀಂದ್ರಾ iMAXX ಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯಂತಹ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಅದು ಯಾವುದೇ ಸಮಯದಲ್ಲಿ ಸ್ಕೂಲ್‌ ಬಸ್‌ ಅನ್ನು ಟ್ರ್ಯಾಕ್‌ ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಹಾಗೂ ವರ್ಗದಲ್ಲಿನ ಅತ್ಯುತ್ತಮ ಆರಾಮದಾಯಕತೆಗಾಗಿ ಪ್ಯಾರಾಬೊಲಿಕ್‌ ಸಸ್ಪೆನ್ಶನ್‌. ಇದೆಲ್ಲವೂ, ಏಕೆಂದರೆ ಪ್ರತಿ ದಿನ ಮಕ್ಕಳು ಶಾಲೆಗೆ ಹೋಗಿ ಬರುವ ಸಂತೋಷದ ಸವಾರಿಗೆ ಅರ್ಹರಾಗಿರುತ್ತಾರೆ.

ಪ್ರಯೋಜನಗಳು

  • ತನ್ನ ವರ್ಗದಲ್ಲಿ ಅತ್ಯುತ್ತಮ ಮೈಲೇಜ್‌
  • ನಿಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ
  • ಅತ್ಯಧಿಕ ಆರಾಮ
  • ಗರಿಷ್ಠ ಅನುಕೂಲತೆ
  • ಹೆಚ್ಚುವರಿ ಸೀಟಿಂಗ್‌ ಕ್ಷಮತೆ
  • ಮಹೀಂದ್ರಾ iMAXXಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ

ಎಲ್‌ಒಪಿ ಪ್ರಯೋಜನ

ಎಲ್‌ಒಪಿ [LPO] ಎಂದರೆ ‘ಲಾಂಗ್‌ ಫ್ಲ್ಯಾಟ್‌ಫಾರ್ಮ್‌ ಓವರ್‌ ಹ್ಯಾಂಗ್‌’. ಈ ಪ್ರಯೋಜನವು ಡ್ರೈವರ್‌ನ ಕೈಗೆ ಹೆಚ್ಚಿನ ಕಂಟ್ರೋಲ್‌ ಅನ್ನು ನೀಡುತ್ತದೆಯಾದ್ದರಿಂದ ಉತ್ತಮ ವಿಸಿಬಿಲಿಟಿಯೊಂದಿಗೆ ಅವನನ್ನು ಸಕ್ರಿಯಗೊಳಿಸುತ್ತದೆ ಹಾಗೂ ಈ ರೀತಿಯಾಗಿ ಮಕ್ಕಳಿಗೆ ಉತ್ತಮ ಸುರಕ್ಷತೆ ದೊರೆಯುತ್ತದೆ. ಈ ಬಸ್ಸಿನ ಬಾಗಿಲು ಫ್ರಂಟ್‌ ವ್ಹೀಲ್‌ನ ಮುಂದೆ ಇರುತ್ತದೆ. ಇದು ಹೆಚ್ಚುವರಿ ಸೀಟ್‌ಗಾಗಿ ಸ್ಥಳಾವಕಾಶ ಮಾಡಿಕೊಡುತ್ತದೆ, ಅಂದರೆ ಪ್ರತಿ ಸವಾರಿಯಲ್ಲಿ ನೀವು ಹೆಚ್ಚು ಮಕ್ಕಳಿಗೆ ಅವಕಾಶ ಕಲ್ಪಿಸಬಹುದು.


ದಕ್ಷತಾಶಾಸ್ತ್ರೀಯ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಆರಾಮದಾಯಕತೆಯನ್ನು ಆನಂದಿಸಿ.

ಮಹೀಂದ್ರಾ CRUZIO GRANDE ಅನ್ನು ವಿದ್ಯಾರ್ಥಿಗಳು ಹಾಗೂ ಚಾಲಕ ಇಬ್ಬರ ಸಮತೋಲನವನ್ನು ಪರಿಪೂರ್ಣವಾಗಿ ಸ್ಫುರಿಸುವ ಆಲೋಚನಾಪೂರ್ವಕ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.

  • ಪ್ಯಾರಾಬೋಲಿಕ್‌ ಸಸ್ಪೆನ್ಶನ್‌ನೊಂದಿಗೆ ತನ್ನ ವರ್ಗದಲ್ಲಿ ಅತ್ಯುತ್ತಮ ಆರಾಮದಾಯಕ ಸವಾರಿ
  • ಕಡಿಮೆ NVH (Noise Vibration Harshness)
  • ಹ್ಯಾಂಡ್‌ ರೆಸ್ಟ್‌ಗಾಗಿ ವಿಂಡೋ ಸಿಲ್‌ನ ಕಡಿಮೆ ಎತ್ತರ
  • ಸರಿಯಾದ ಜಾಗದಲ್ಲಿ ಉತ್ತಮ ವೆಂಟಿಲೇಷನ್‌ ಹಾಗೂ ಬೆಳಕನ್ನು ನೀಡುವ ಸ್ಲೈಡಿಂಗ್‌ ವಿಂಡೋಗಳು
  • ಸ್ಟೈಲಿಶ್‌ ಫ್ರಂಟ್‌ ಹಾಗೂ ರಿಯರ್‌ FRP ಫೇಶಿಯಾ
  • ಅಗಲವಾದ ಹಾಗೂ ಆರಾಮದಾಯಕ ಸೀಟುಗಳು

Cruzio Grande School
ಬಗ್ಗೆ ವಿಚಾರಣೆ

ಒಂದು ವೇಳೆ ನಿಮಗೆ ಮಾಹಿತಿ ಬೇಕಾಗಿದ್ದರೆ ನಮ್ಮ ಬಳಿ ಉತ್ತರವಿದೆ.