ಭಾರೀ ವಾಣಿಜ್ಯ ವಾಹನಗಳು

ಹಾಲೇಜ್‌

ಮಹೀಂದ್ರಾ BLAZO X ಅದರ ಸಾಟಿಯಿಲ್ಲದ ಇಂಧನ ದಕ್ಷತೆ ಹಾಗೂ ಸಾಬೀತಾದ ಫ್ಯೂಯೆಲ್‌ಸ್ಮಾರ್ಟ್‌ (FuelSmart) ಟೆಕ್ನಾಲಾಜಿಯೊಂದಿಗೆ ಉತ್ತಮ ಪರ್ಫಾರ್ಮೆನ್ಸ್‌ನ ಗ್ಯಾರಂಟಿಯನ್ನು ಹೊಂದಿದೆ. ಇದರ ಗಟ್ಟಿಮುಟ್ಟಾದ ನಿರ್ಮಾಣವು ಶಕ್ತಿಶಾಲಿ ಡ್ರೈವ್‌ಲೈನ್‌ ಸಂಯೋಜನೆ ಹಾಗೂ ಗರಿಷ್ಠ ಆರಾಮದಾಯಕತೆಗಾಗಿ ಉತ್ತಮ ಕ್ಯಾಬಿನ್‌ನಂತಹ ಸದೃಢ ವೈಶಿಷ್ಟ್ಯಗಳೊಂದಿಗೆ ವರ್ಧಿಸಲಾಗಿದೆ. ಇದಕ್ಕಿಂತ ಹೆಚ್ಚಾಗಿ, ಈ ಪವರ್‌ಪುಲ್‌ ಟ್ರಕ್‌ನ ಹಿಂದೆ ಇರುವ ಮಹೀಂದ್ರಾದ ಸರ್ವಿಸ್‌ ಹಾಗೂ ಸ್ಪೇರ್‌ಗಳ ಆಜೇಯ ಗ್ಯಾರಂಟೀ, ಉನ್ನತ ಮೈಲೇಜಿನ ಭರವಸೆಯು, HCV ಹಾಲೇಜ್‌ ವಿಭಾಗದಲ್ಲಿ BLAZO X ಅನ್ನು ಅತ್ಯುತ್ತಮ ಆಯ್ಕೆಯನ್ನಾಗಿ ಮಾಡುತ್ತದೆ.

ಟಿಪ್ಪರ್‌

ಪರಿಸ್ಥಿತಿಗಳು ಎಷ್ಟೇ ಕಠಿಣವಾಗಿರಲಿ ಅಥವಾ ಒರಟಾಗಿರಲಿ, ಮಹೀಂದ್ರಾ BLAZO X ರೇಂಜ್‌ನ ಟಿಪ್ಪರ್‌ಗಳ ವಿನ್ಯಾಸ ಹಾಗೂ ನಿರ್ಮಾಣವನ್ನು ಅವುಗಳೆಲ್ಲವನ್ನೂ ಧೈರ್ಯವಾಗಿ ಎದುರಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಯಂತ್ರಗಳ ಉನ್ನತ ಬಾಡಿಯ ಸಾಮರ್ಥ್ಯವು ಇಂಧನ ಕ್ಷಮತೆಯಲ್ಲಿ ರಾಜಿ ಮಾಡಿಕೊಳ್ಳದೆ ಹೆಚ್ಚಿನ ಉತ್ಪಾದಕತೆಯನ್ನು ಖಾತರಿಪಡಿಸುತ್ತದೆ. ಇತರ ಉನ್ನತ ವೈಶಿಷ್ಟ್ಯಗಳ ಜೊತೆಗೆ, ಈ ಟಿಪ್ಪರ್‌ಗಳು ಗಣಿಗಾರಿಕೆ ಹಾಗೂ ಕನ್‌ಸ್ಟ್ರಕ್ಷನ್‌ ಕಾರ್ಯಗಳನ್ನು ಎಂದಿಗಿಂತಲೂ ಸುಲಭವಾಗಿ ನಿಭಾಯಿಸುತ್ತವೆ.



ಟ್ರ್ಯಾಕ್ಟರ್‌ ಟ್ರೇಲರ್‌

ಮಹೀಂದ್ರಾ BLAZO X BSVI ದೇಶಾದ್ಯಂತ ಅಸಂಖ್ಯಾತ ಟ್ರಾನ್ಸ್‌ಪೋರ್ಟರ್‌ಗಳ ಹೃದಯವನ್ನು ಗೆದ್ದಿರುವ ಖಚಿತವಾದ ಅದೇ ಉನ್ನತ ಮೈಲೇಜ್‌ನೊಂದಿಗೆ ಬಂದಿದೆ. ಇಂಧನ ಮಿತವ್ಯಯದಲ್ಲಿ ಇದು ತುಂಬಾ ಮುಂದಿದೆ ಹಾಗೂ ನಿರ್ವಹಣಾ ವೆಚ್ಚಗಳು ಅತ್ಯಂತ ಕಡಿಮೆಯಿವೆ. ಉತ್ಪನ್ನಗಳ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ.