ಇಂಟರ್‌ಮೀಡಿಯೇಟ್‌ ಕಮರ್ಷಿಯಲ್‌ ವೆಹಿಕಲ್‌

ಫುರಿಯೋ

ಸಂಪೂರ್ಣ ಟ್ರಕ್‌ ಉದ್ಯಮದಲ್ಲಿ ಬಿರುಗಾಳಿಯನ್ನು ಎಬ್ಬಿಸಿರುವ ಟ್ರಕ್‌ ಇದಾಗಿದೆ. ಹೊಚ್ಚ ಹೊಸ ಮಹೀಂದ್ರಾ ಫುರಿಯೋ [Mahindra FURIO] ಅನ್ನು ಪ್ರಸ್ತುತಪಡಿಸಲಾಗುತ್ತಿದೆ. ಈ ಟ್ರಕ್ ಅನ್ನು ಇಟಲಿಯಲ್ಲಿರುವ ಮಹೀಂದ್ರಾದ ಡಿಸೈನ್‌ ಕಂಪನಿ ಪಿನಿನ್‌ಫಾರಿನಾ (Pininfarina)ದಲ್ಲಿ ವಿನ್ಯಾಸಗೊಳಿಸಲಾಗಿದೆ. Mahindra FURIOವನ್ನು ಅಪೇಕ್ಷಣೀಯ ನೋಟಗಳೊಂದಿಗೆ ರಚಿಸಲಾಗಿದೆ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆಯ ಭರವಸೆಯನ್ನು ನೀಡುತ್ತದೆ. ನಮ್ಮ ಟ್ರಕ್‌ ರೇಂಜ್‌ನಲ್ಲಿ ಈ ಹೆಮ್ಮೆಯ ಸೇರ್ಪಡೆಯು ಇಂಟರ್‌ಮೀಡಿಯೇಟ್‌ ಕಮರ್ಷಿಯಲ್‌ ವೆಹಿಕಲ್‌ (ICV)ಗಾಗಿ ಹೊಸ ಅರುಣೋದಯವಾಗಿದೆ ಹಾಗೂ ಈಗ ಮಹೀಂದ್ರಾವನ್ನು ಸಂಪೂರ್ಣ ಶ್ರೇಣಿಯ ವಾಣಿಜ್ಯ ವಾಹನಗಳ ಕಂಪನಿಯನ್ನಾಗಿ ಮಾಡಿದೆ.

ಫುರಿಯೋ ಲಾಂಚ್‌ನ ವಿಶೇಷತೆಗಳು

29 ಜನವರಿ, 2019ರಂದು MTBಯು ICV ಟ್ರಕ್‌ಗಳ ಒಂದು ಹೊಸ ರೇಂಜ್‌ FURIOದೊಂದಿಗೆ ಹೊಚ್ಚ-ಹೊಸ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಲಾಂಚ್‌ನೊಂದಿಗೆ ‘ಹೆಚ್ಚು ಲಾಭವನ್ನು ಪಡೆಯಿರಿ ಅಥವಾ ಟ್ರಕ್‌ ಅನ್ನು ಹಿಂತಿರುಗಿಸಿ’ ಎಂಬ ಅಭೂತಪೂರ್ವ ಗ್ರಾಹಕ ಮೌಲ್ಯ ಪ್ರತಿಪಾದನೆಯೊಂದಿಗೆ ಗೂಡ್ಸ್‌ ವಿಭಾಗದಲ್ಲಿ ಸಂಪೂರ್ಣ ಶ್ರೇಣಿಯ ವಾಣಿಜ್ಯ ವಾಹನ ಕಂಪನಿಯಾಗಿ ಮಹೀಂದ್ರಾ ಸ್ಥಾನವನ್ನು ಪಡೆದುಕೊಂಡಿದೆ.