ಕ್ರುಝಿಯೊ ಗ್ರ್ಯಾಂಡ್‌ BS6 -ಅವಲೋಕನ

ಸಂಪೂರ್ಣ ಹೊಸ ಕ್ರುಝಿಯೊ ಗ್ರ್ಯಾಂಡ್‌. ತನ್ನ ವರ್ಗದಲ್ಲಿ ಅತ್ಯಂತ ಲಾಭದಾಯಕ ಬಸ್‌.

ಮಹೀಂದ್ರಾದ ಅತ್ಯಂತ ಐಷಾರಾಮಿ ಬಸ್‌ ಅನ್ನು ಪರಿಚಯಿಸಿಕೊಳ್ಳಿ.

ಪ್ರತಿ ಪಯಣವನ್ನು ಅತ್ಯಂತ ಆರಾಮದಾಯಕವಾಗಿಸುವ ಭರವಸೆ ನೀಡುವ ಬಸ್‌ ಇಲ್ಲಿದೆ. ಪ್ರಸ್ತುತಪಡಿಸುತ್ತಿದೆ ಸಂಪೂರ್ಣ ಹೊಸ ಪ್ಯಾಸೆಂಜರ್‌ ಬಸ್‌, ಮಹೀಂದ್ರಾ ಕ್ರುಝಿಯೊ ಗ್ರ್ಯಾಂಡ್‌ [CRUZIO GRANDE]. ತನ್ನ ವರ್ಗದಲ್ಲಿನ ಅತ್ಯುತ್ತಮವಾದ ಈ ಬಸ್‌ನ ಹಿನ್ನೆಲೆಯಲ್ಲಿ ಮಹೀಂದ್ರಾದ ಪ್ರಬಲವಾದ ಪರಂಪರೆಯಿದೆ. ಅದು ನಿಮಗೆ ಅಪ್ರತಿಮ ಪರ್ಫಾರ್ಮೆನ್ಸ್‌ ಹಾಗೂ ಮಿತವ್ಯಯದ ಭರವಸೆಯನ್ನು ನೀಡುತ್ತದೆ. Mahindra CRUZIO GRANDE ನಗರ, ಇಂಟರ್‌ಸಿಟಿ ಹಾಗೂ ಕೋಚ್‌ ಕಾರ್ಯಗಳಲ್ಲಿ ಲಾಭಗಳಿಸಲು ಸೂಕ್ತವಾಗಿದೆ. ದೀರ್ಘಾವಧಿಯ ಲಾಭದಾಯಕತೆ ಹಾಗೂ ಒಟ್ಟಾರೆ ಕಡಿಮೆ ನಿರ್ವಹಣಾ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ಮಿಸಲಾಗಿದೆ. ನಿಸ್ಸಂದೇಹವಾಗಿ, ಇದು ನಿಮ್ಮ ಫ್ಲೀಟ್‌ಗಾಗಿ ಪರಿಪೂರ್ಣ ಸೇರ್ಪಡೆಯಾಗಿರುತ್ತದೆ.

ಪ್ರಯೋಜನಗಳು

  • ತನ್ನ ವರ್ಗದಲ್ಲಿ ಅತ್ಯುತ್ತಮ ಮೈಲೇಜ್‌
  • ನಿಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ
  • ಅತ್ಯಧಿಕ ಆರಾಮ
  • ಗರಿಷ್ಠ ಅನುಕೂಲತೆ
  • ಹೆಚ್ಚುವರಿ ಸೀಟಿಂಗ್‌ ಕ್ಷಮತೆ
  • ಮಹೀಂದ್ರಾ iMAXXಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ

ಎಲ್‌ಪಿಒದ ಪ್ರಯೋಜನವನ್ನು ಪಡೆಯಿರಿ.

ಎಲ್‌ಪಿಒ [LPO] ಎಂದರೆ ‘ಲಾಂಗ್‌ ಪ್ಲ್ಯಾಟ್‌ಫಾರ್ಮ್‌ ಒವರ್‌ಹ್ಯಾಂಗ್‌’, ಇದು ಎಲ್‌ಪಿ ಚೆಸ್ಸಿಯ ವೇರಿಯೆಂಟ್‌ ಆಗಿರುತ್ತದೆ. ಈ ಓವರ್‌ ಹ್ಯಾಂಗ್‌ ಆ್ಯಕ್ಸಿಲ್‌ ಹಾಗೂ ಟನೇಜ್‌ನ ಸಂಖ್ಯೆಯನ್ನು ಹೆಚ್ಚಿಸದೆ ಉದ್ದ ಲೋಡಿಂಗ್‌ ಸ್ಪ್ಯಾನ್‌ ಅನ್ನು ನೀಡುತ್ತದೆ. ಮಹೀಂದ್ರಾ CRUZIO GRANDE ನಲ್ಲಿ ಎಲ್‌ಪಿಒ ಪ್ರಯೋಜನವು ಚಾಲಕನ ಕೈಗೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆಯಾದ್ದರಿಂದ ಉತ್ತಮ ವಿಜಿಬಿಲಿಟಿ ದೊರೆಯುತ್ತದೆ ಹಾಗೂ ಪ್ರಯಾಣಿಕರ ಸುರಕ್ಷತೆಯನ್ನೂ ಖಚಿತಪಡಿಸುತ್ತದೆ. ಈ ಬಸ್ಸಿನ ವಿಶೇಷ ವೈಶಿಷ್ಟ್ಯವೆಂದರೆ ಬಾಗಿಲು ಫ್ರಂಟ್‌ ವ್ಹೀಲ್‌ನ ಮುಂದೆ ಇರುತ್ತದೆ. ಇದು ಹೆಚ್ಚುವರಿ ಪ್ರಯಾಣಿಕರ ಸೀಟ್‌ಗಾಗಿ ಸ್ಥಳವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ಮೂಲಕ ಹೆಚ್ಚಿನ ಪ್ರಯೋಜನವನ್ನು ಉಂಟುಮಾಡುತ್ತದೆ. ನಿಮ್ಮ ಬಿಸಿನೆಸ್‌ಗೆ ಎಲ್‌ಪಿಒ ಪ್ರಯೋಜನವನ್ನು ಪಡೆಯುವ ಸಮಯ ಇದಾಗಿರುತ್ತದೆ, ನಿಮ್ಮ ಫ್ಲೀಟ್‌ಗೆ ಮಹೀಂದ್ರಾ CRUZIO GRANDE ಅನ್ನು ಸೇರಿಸುವ ಸಮಯ ಬಂದಿದೆ.


ದಕ್ಷತಾಶಾಸ್ತ್ರೀಯ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಸುಖವನ್ನು ಆನಂದಿಸಿ.

ಮಹೀಂದ್ರಾ CRUZIO GRANDE ಅನ್ನು ಪ್ರಯಾಣಿಕರು ಹಾಗೂ ಚಾಲಕ ಇಬ್ಬರಿಗೂ ಸೌಖ್ಯವನ್ನು ಖಚಿತಪಡಿಸುವ ಪರಿಪೂರ್ಣ ಸಮತೋಲನವನ್ನು ಸ್ಫುರಿಸುವ ಆಲೋಚನಾಪೂರ್ವಕ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.

  • ಪ್ಯಾರಾಬೋಲಿಕ್‌ ಸಸ್ಪೆನ್ಶನ್‌ನೊಂದಿಗೆ ತನ್ನ ವರ್ಗದಲ್ಲಿ ಅತ್ಯುತ್ತಮ ಸುವಿಹಾರಿ ಸವಾರಿ
  • ಕಡಿಮೆ NVH (Noise Vibration Harshness)
  • ಹ್ಯಾಂಡ್‌ ರೆಸ್ಟ್‌ಗಾಗಿ ವಿಂಡೋ ಸಿಲ್‌ನ ಎತ್ತರ ಕಡಿಮೆಗೊಳಿಸಲಾಗಿದೆ
  • ಸರಿಯಾದ ಜಾಗದಲ್ಲಿ ಉತ್ತಮ ಗಾಳಿ ಹಾಗೂ ಬೆಳಕನ್ನು ನೀಡುವ ಸ್ಲೈಡಿಂಗ್‌ ವಿಂಡೋಗಳು
  • ಸ್ಟೈಲಿಶ್‌ ಫ್ರಂಟ್‌ ಹಾಗೂ ರಿಯರ್‌ FRP ಫೇಶಿಯಾ
  • ವಿಶಾಲವಾದ ಹಾಗೂ ಆರಾಮದಾಯಕ ಸೀಟುಗಳು

Cruzio Grande
ಬಗ್ಗೆ ವಿಚಾರಣೆ

ಒಂದು ವೇಳೆ ನಿಮಗೆ ಮಾಹಿತಿ ಬೇಕಾಗಿದ್ದರೆ ನಮ್ಮ ಬಳಿ ಉತ್ತರವಿದೆ.