Furio

Mahindra ಮಧ್ಯಂತರ ವಾಣಿಜ್ಯ ವಾಹನಗಳು ಮತ್ತು ಟ್ರಕ್‌ಗಳ ಶ್ರೇಣಿಯು 11ರಿಂದ 14 ಟನ್ ರೂಪಾಂತರಗಳಲ್ಲಿ ಲಭ್ಯವಿದೆ ಮತ್ತು ಎಲ್ಲ ಬಗೆಯ ವ್ಯಾಪಾರಕ್ಕೂ ಸೂಕ್ತವಾಗಿರುತ್ತವೆ. Mahindra Furio ವನ್ನು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಖಾತರಿಪಡಿಸುವ ಅಪೇಕ್ಷಣೀಯ ವಿನ್ಯಾಸದಲ್ಲಿ ರಚಿಸಲಾಗಿದೆ.

ವೈಶಿಷ್ಟ್ಯಗಳು & USP ಗಳು:

ಹೆಚ್ಚಿನ ಸರಕುಗಳನ್ನು ತಲುಪಿಸಿ, ಗರಿಷ್ಠ ಆದಾಯವನ್ನು ನೀಡುತ್ತದೆ.

Mahindra ದ Furio ಎರಡು ಕಾರ್ಗೋ ಬಾಡಿ ಲೆಂತ್ ಆಯ್ಕೆಗಳೊಂದಿಗೆ ಪ್ರತಿಯೊಂದು ವ್ಯಾಪಾರದ ಅನ್ವಯಕ್ಕೂ ಸೂಕ್ತವಾಗಿರುತ್ತದೆ. ಅಲ್ಲದೆ, ಹೆಚ್ಚಿನ ಲೋಡ್-ಸಾಗಿಸುವ ಸಾಮರ್ಥ್ಯವು ಪ್ರತಿ ವಿತರಣೆಗೆ ಹೆಚ್ಚಿನ ಗಳಿಕೆಯನ್ನು ನೀಡುತ್ತದೆ.

ಚತುರ ಚಾಲಕ ಮಾಹಿತಿ ವ್ಯವಸ್ಥೆ (DIS):

Mahindra ದ ICV ಟ್ರಕ್‌ನ ಚಾಲಕ ಮಾಹಿತಿ ವ್ಯವಸ್ಥೆಯು ಟ್ರಕ್‌ನ ಪ್ರಮುಖ ಮಾಹಿತಿಯನ್ನು ತ್ವರಿತವಾಗಿ ಪರಿಶೀಲಿಸಲು ಮತ್ತು ಅದರ ಕಾರ್ಯಕ್ಷಮತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಚಾಲಕನಿಗೆ ಅನುವು ಮಾಡಿಕೊಡುತ್ತದೆ. ಟ್ರಕ್‌ನ ಎಲ್ಲ ಕಾರ್ಯಕ್ಷಮತೆಯ ಅಂಕಿಅಂಶಗಳ ಸ್ಪಷ್ಟ ಚಿತ್ರವನ್ನು ಪಡೆಯಲು, ಚುಟುಕಾಗಿ ಪರಿಶೀಲಿಸಿ.

ಗರಿಷ್ಠ ಸೌಕರ್ಯವು ಗರಿಷ್ಠ ಗಳಿಕೆಗೆ ಕಾರಣವಾಗುತ್ತದೆ:

Mahindra ದ ICV ವಿಭಾಗವಾದ FURIO ಹಲವು ವಿಧಗಳಲ್ಲಿ ಚಿಂತನಶೀಲವಾಗಿದೆ. ವಿಶಾಲವಾದ ವಾಕ್-ಥ್ರೂ ಕ್ಯಾಬಿನ್ ಸುಲಭ ಪ್ರವೇಶ ಮತ್ತು ನಿರ್ಗಮನಕ್ಕೆ ಅನುಕೂಲ ಕಲ್ಪಿಸುತ್ತದೆ. ಲಾಂಗಿಂಗ್ ವ್ಯವಸ್ಥೆಯು ಸಹ-ಚಾಲಕನಿಗೆ ಚಾಲನೆಯ ಸಮಯದಲ್ಲಿ ವಿಶ್ರಾಂತಿಯನ್ನು ಒದಗಿಸುತ್ತದೆ. ಚಾಲಕನು ನಿಲ್ಲಿಸುವ ಸಮಯದಲ್ಲಿ ಟ್ರಕ್‌ನಿಂದ ಇಳಿಯುವ ಅಗತ್ಯವಿಲ್ಲದೆ ವಿಶ್ರಾಂತಿ ಪಡೆಯಬಹುದು.

ಹೆಚ್ಚಿನ ಸಮಯ ಮತ್ತು ಹೆಚ್ಚಿನ ಗಳಿಕೆಗಾಗಿ ವರ್ಧಿತ ಸುರಕ್ಷತೆ:

ಸುರಕ್ಷತೆಗಾಗಿ ವರ್ಗದ ಮಾನದಂಡಗಳನ್ನು Mahindra FURIO ಇನ್ನಷ್ಟು ಎತ್ತರಕ್ಕೆ ಏರಿಸುತ್ತದೆ. ಇದು ಭಾರತೀಯ ನಿಬಂಧನೆಗಳನ್ನು ತುಂಬ ಚೆನ್ನಾಗಿ ಪಾಲಿಸುತ್ತದೆ. ಡ್ಯುಯಲ್ ಚೇಂಬರ್ ಹೆಡ್‌ಲ್ಯಾಂಪ್‌ಗಳು ಸುರಕ್ಷತೆಯ ಅಂಶವನ್ನು ಹೆಚ್ಚಿಸಲು ದೀರ್ಘವಾದ ಬೆಳಕಿನ ಕಿರಣಗಳನ್ನು ಒದಗಿಸುತ್ತದೆ. ಅಗಲವಾಗಿ ಹರಡುವ ಫಾಗ್ ಲ್ಯಾಂಪ್‌ಗಳು, ICV ವಿಭಾಗದಲ್ಲಿ ಪ್ರಥಮವಾಗಿವೆ. ರಾತ್ರಿ ವೇಳೆ ತಿರುವುಗಳಲ್ಲಿ ವ್ಯಾಪಕವಾದ ಗೋಚರತೆಯನ್ನು ನೀಡುತ್ತವೆ.

ಇವುಗಳಿಗೆ ಪರಿಪೂರ್ಣ:

ಹಣ್ಣುಗಳು ಮತ್ತು ತರಕಾರಿಗಳನ್ನು ಸಾಗಿಸಲು, ಇ-ಕಾಮರ್ಸ್ ಪಾರ್ಸೆಲ್‌ಗಳು, ಕೈಗಾರಿಕಾ ಸರಕುಗಳು, ವಾಹನಗಳ ಬಿಡಿಭಾಗಗಳು, FMCG, ಮಾರುಕಟ್ಟೆ ಸರಕುಗಳು, ಔಷಧ ಉತ್ಪನ್ನಗಳು ಇತ್ಯಾದಿಗಳ ಯಾವುದೇ ಆಕಾರ ಅಥವಾ ತೂಕವನ್ನು ತಲುಪಿಸಲು Mahindra Furio ಪರಿಪೂರ್ಣ ICV ಆಗಿದೆ.

FAQ ಗಳು

Mahindra Furio ಶಕ್ತಿಯುತ mDi ಟೆಕ್ ಎಂಜಿನ್, 4 ಸಿಲಿಂಡರ್, BS-VI (EGR + SCR ತಂತ್ರಜ್ಞಾನದೊಂದಿಗೆ) ಮತ್ತು 160ರಿಂದ 190 ಲೀಟರ್‌ಗಳವರೆಗಿನ ಇಂಧನ ಟ್ಯಾಂಕ್ ಸಾಮರ್ಥ್ಯ #235/330 ಲೀಟರ್‌ಗಳು (ಐಚ್ಛಿಕ) ಹೊಂದಿದೆ.

Mahindra Furio BS-VI ಹೊರಸೂಸುವಿಕೆಯ ಮಾನದಂಡಗಳನ್ನು-ಅನುವರ್ತನೆಯ ಶ್ರೇಣಿಯನ್ನು ಹೊಂದಿದೆ.

Mahindra ದ LCV ವಿಭಾಗದಲ್ಲಿ 7 Furio ಮಾದರಿಗಳು ಲಭ್ಯವಿವೆ.