IMAXX

iMAXX

iMAXX ಮಹೀಂದ್ರಾ ಟ್ರಕ್‌ ಹಾಗೂ ಬಸ್‌ನ ಮುಂದಿನ ಪೀಳಿಗೆಯ ಟೆಲಿಮ್ಯಾಟಿಕ್ಸ್‌ ತಂತ್ರಜ್ಞಾನವಾಗಿರುತ್ತದೆ. ಇದು BS6 ವಾಹನಗಳಿಗಾಗಿ ನಮ್ಮ ಗ್ಯಾರಂಟೀಡ್‌ ಅನುಭವದ ಭರವಸೆಯ ಕೇಂದ್ರದಲ್ಲಿದೆ. iMAXX ಒಂದು ಬುದ್ಧಿವಂತ ಫ್ಲೀಟ್‌ ಟೆಲಿಮ್ಯಾಟಿಕ್ಸ್‌ ಪರಿಹಾರವಾಗಿದ್ದು, ಅದು ಪ್ರತಿ ಟ್ರಾನ್ಸ್‌ಪೋರ್ಟರ್‌ ಆದಾಯವನ್ನು ಹೆಚ್ಚಿಸಬಹುದು. ಇದು ಡ್ಯೂಯಲ್‌ CAN [ಕಂಟ್ರೋಲರ್‌ ಏರಿಯಾ ನೆಟ್‌ವರ್ಕ್‌], 4G ಯಂತಹ ಅತ್ಯಾಧುನಿಕ ಟೆಲಿಮೆಟ್ರಿ ತಂತ್ರಜ್ಞಾನ ಹಾಗೂ ವಾಹನದ ಹೆಲ್ತ್ ಹಾಗೂ ಪರ್ಪಾರ್ಮೆನ್ಸ್‌ ಬಗ್ಗೆ ಶಕ್ತಿಶಾಲಿ ಒಳನೋಟಗಳನ್ನು ಒದಗಿಸಲು ಮಶಿನ್‌ ಲರ್ನಿಂಗ್‌ ಹಾಗೂ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ನಂತಹ ಇತರ ಪ್ರಮುಖ ಡಿಜಿಟಲ್‌ ತಂತ್ರಜ್ಞಾನಗಳನ್ನು ನಿಯೋಜಿಸುತ್ತದೆ.

iMAXX ಮುಖ್ಯವಾಗಿ ಸ್ಥಳದ ಟ್ರ್ಯಾಕಿಂಗ್‌ ಆಧಾರಿತ ಸೇವೆಗಳು ಹಾಗೂ ಮೂಲ ವಾಹನದ ಪರ್ಫಾರ್ಮೆನ್ಸ್‌ ವಿಶ್ಲೇಷಣೆಯ ಮೇಲೆ ಕೇಂದ್ರೀಕೃತವಾದ ಇದು ಮಾರುಕಟ್ಟೆಯಲ್ಲಿ ಒದಗಿಲಾದ ಸಾಮಾನ್ಯ ಟೆಲಿಮ್ಯಾಟಿಕ್‌ ಪರಿಹಾರಗಳಿಗೆ ಹೋಲಿಸಿದಾಗ iMAXX ವಿಭಿನ್ನ ಮಟ್ಟದಲ್ಲಿದೆ. iMAXX ಪರಿಹಾರವು ಎರಡು ಅಂಶಗಳಲ್ಲಿ ಬದ್ಧಿಶಾಲಿ ಹಾಗೂ ಕ್ರಾಂತಿಕಾರಿಯಾಗಿದೆ.

ಎಂಬೆಡೆಡ್‌ ಡಿವೈಸ್‌ ಕ್ಷಮತೆ

ಮೊಟ್ಟ ಮೊದಲನೆಯದಾಗಿ, ಇದು ಮುಂದಿನ ಸರ್ವರ್‌ ಪ್ರೊಸೆಸಿಂಗ್‌ಗಾಗಿ 4G ಏರ್‌ವೇವ್‌ಗಳಲ್ಲಿ ಸಂಪೂರ್ಣ ವಾಸ್ತವಿಕ ಸಮಯದಲ್ಲಿ ಉನ್ನತ ಫ್ರಿಕ್ವೆನ್ಸಿ ಎಂಜಿನ್‌ ಹಾಗೂ ಅಲೈಡ್‌ ಸಿಸ್ಟಮ್‌ ಡೇಟಾವನ್ನು ದೊಡ್ಡ ಪ್ರಮಾಣದಲ್ಲಿ ಸುರಕ್ಷಿತವಾಗಿ ತೆಗೆದುಕೊಳ್ಳುವುದು iMAXX ಎಂಬೆಡೆಡ್‌ ಡಿವೈಸ್‌ನ ಪ್ರಮುಖ ಸಾಮರ್ಥ್ಯವಾಗಿದೆ.

ಟಿಜಿಟಲ್‌ ಟ್ವಿನ್‌ ಪ್ಲ್ಯಾಟ್‌ಫಾರ್ಮ್‌

ಎರಡನೆಯದಾಗಿ, ಇದು ನಿಖರವಾದ, ವಿಶ್ವಾಸಾರ್ಹವಾದ ಹಾಗೂ ಮುನ್ಸೂಚಕ ಬಿಸಿನೆಸ್‌ ಹಾಗೂ ಎಂಜಿನಿಯರಿಂಗ್‌ ಒಳನೋಟಗಳನ್ನು ಒದಗಿಸಲು ಈ iMAXX ಡಿಜಿಟಲ್‌ ಟ್ವಿನ್‌ ಫ್ಲಾಟ್‌ಫಾರ್ಮ್‌ ಮಟ್ಟದಲ್ಲಿ ಸ್ಥಾಪಿಸಲಾದ ಮಶಿನ್‌ ಲರ್ನಿಂಗ್‌ ಅಲ್ಗಾರಿಥಮ್‌ಗಳು ಹಾಗೂ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮಾಡೆಲ್‌ನಲ್ಲಿ ಇದೆ. ಬಹುತೇಕ ಟೆಲಿಮ್ಯಾಟಿಕ್‌ ಪರಿಹಾರಗಳು ಯಾವುದೇ ಹೆಚ್ಚಿನ ಇಂಟೆಲಿಜೆನ್ಸ್‌ ಅಂತರ್ನಿರ್ಮಿತವಿಲ್ಲದೇ ಗ್ರಾಹಕರಿಗೆ ವಾಹನದ ಡೇಟಾವನ್ನು ತರುತ್ತವೆ ಹಾಗೂ ತೋರಿಸುತ್ತವೆ,CV ಉದ್ಯಮದಲ್ಲಿ ವಿಶ್ವಸನೀಯತೆ, ಪರಿಣಾಮಕಾರಿತ್ವ ಹಾಗೂ ವಿಶ್ವಾಸಾರ್ಹತೆಗಾಗಿ ಸಾಮಾನ್ಯ ಡೇಟಾದಲ್ಲಿ ಇಂಟೆಲಿಜೆನ್ಸ್‌ ಸೇರಿಸಲು iMAXXನ ಸಾಮರ್ಥ್ಯವು ಅಭೂತಪೂರ್ವವಾಗಿದೆ.

ಈ ಮೇಲಿನ ಎರಡು ಪ್ರಮುಖ ಸಾಮರ್ಥ್ಯಗಳನ್ನು ಬಳಸಿಕೊಂಡು, iMAXX ಗ್ರಾಹಕರಿಗೆ ಹೇಗೆ ಅದ್ವಿತೀಯ ಹಾಗೂ ಅಭೂತಪೂರ್ವ ಮೌಲ್ಯವನ್ನು ನೀಡುತ್ತದೆ ಎನ್ನುವುದು ಇಲ್ಲಿದೆ:

  • iMAXX ಪ್ರತಿ ವಾಹನಕ್ಕಾಗಿ ಇಂಧನ ಮಿತವ್ಯಯಕ್ಕೆ ಕಾರಣವಾಗುವ ವಿಭಿನ್ನ ಅಂಶಗಳ ವಿವರವಾದ ಗ್ರಾಫಿಕಲ್‌ವಿಶ್ಲೇಷಣೆಯೊಂದಿಗೆ ಅತ್ಯಂತ ವಿಶ್ವಾಸಾರ್ಹ ಹಾಗೂ ಹೆಚ್ಚು ನಿಖರವಾದ ಇಂಧನ ಬಳಕೆಯ ವರದಿಯನ್ನು ನೀಡುತ್ತದೆ- ಐಡ್ಲಿಂಗ್, ಗೇರ್‌ ಬಳಕೆ, FuelSmart ಮೋಡ್‌ ಬಳಕೆ, ವಾಹನದ ಲೋಡ್‌, ಸ್ಪೀಡ್ ಪ್ರೊಫೈಲ್‌ ಮುಂತಾದವು.
  • iMAXX ಇಂಧನ ತುಂಬುವಿಕೆ ಹಾಗೂ ಇಂಧನ ಕಳ್ಳತನಕ್ಕೆ ಸಂಬಂಧಿಸಿದ ನಿಖರವಾದ ಹಾಗೂ ವಿಶ್ವಾಸಾರ್ಹವಾದ ಡೇಟಾ ಹಾಗೂ ಎಚ್ಚರಿಕೆಗಳನ್ನು ಒದಗಿಸುತ್ತದೆ. ಇಂಧನ ಮಟ್ಟದ ಟ್ರ್ಯಾಂಕಿಂಗ್‌ಗಾಗಿ ಯಾವುದೇ ಹೆಚ್ಚುವರಿ ಸೆನ್ಸಾರ್‌ಗಳ ಅಗತ್ಯವಿಲ್ಲ. ಅಂತಹ ಉನ್ನತ ಮಟ್ಟದ ನಿಖರತೆ ಹಾಗೂ ರೆಸೊಲ್ಯೂಶನ್‌ ಒದಗಿಸಲು, ಮಾರುಕಟ್ಟೆಯಲ್ಲಿ ಇತರ ಪರಿಹಾರಗಳಿಗಾಗಿ ಅತ್ಯಾಧುನಿಕ ಇಂಧನ ಟ್ಯಾಂಕ್‌ ಸೆನ್ಸಾರ್‌ಗಳ ಅಳವಡಿಕೆಗಾಗಿ ಹಾಗೂ ವಾಹನದ ಡೌನ್‌ಟೈಮ್‌ನಲ್ಲಿ ತೊಡಕಿನ ಕ್ಯಾಲಿಬರೇಶನಗಳಿಗಾಗಿ ಹೆಚ್ಚಿನ ಹೂಡಿಕೆ ಅಗತ್ಯವಾಗಿರುತ್ತದೆ.
  • ಪ್ರೊಗ್ನೊಸ್ಟಿಕ್ಸ್‌ ಕ್ಷಮತೆ: iMAXX ನಲ್ಲಿ ಆಲ್ಟರ್‌ನೇಟರ್‌/ಬ್ಯಾಟರಿ ಸಿಸ್ಟಮ್‌, ಟರ್ಬೊಚಾರ್ಜರ್‌ ಹಾಗೂ ಎಂಜಿನ್‌ ಕೂಲಿಂಗ್‌ ಸಿಸ್ಟಮ್‌ಗಾಗಿ ಆರಂಭಿಕ ವೈಫಲ್ಯವನ್ನು -ಗುರುತಿಸುವ ಅಲ್ಗಾರಿದಮ್‌ಗಳು ಇವೆ; ಇದು ವಾಹನದ ಕಂಟ್ರೋಲರ್‌ ಏರಿಯಾ ನೆಟ್‌ವರ್ಕ್‌ನಲ್ಲಿ ತತ್ಪರಿಣಾಮವಾದ ಫಾಲ್ಟ್‌ ಕೋಡ್‌ಗಳನ್ನು ರಿಲೇ ಮಾಡುವ ಮೊದಲೇ ಗ್ರಾಹಕರನ್ನು ಎಚ್ಚರಿಸುತ್ತದೆ.
  • ರಿಮೋಟ್‌ ಡಯಾಗ್ನಾಸ್ಟಿಕ್‌ ಕ್ಷಮತೆ: iMAXXವಾಹನದಲ್ಲಿ ಜನರೇಟ್‌ ಆಗುವ ಎಲ್ಲ ಫಾಲ್ಟ್‌ ಕೋಡ್‌ ಅನ್ನು ಮುಂದಿನ ಕ್ರಮಕ್ಕಾಗಿ ಸರ್ವರ್‌ಗೆ ವಾಸ್ತವಿಕ ಸಮಯದಲ್ಲಿ ತಿಳಿಸುತ್ತದೆ ಎಂದು ಖಚಿತಪಡಿಸುತ್ತದೆ.
  • iMAXX AdBlue ಫಿಲಿಂಗ್‌ ಹಾಗೂ ಕಳುವಿನ ಡೇಟಾ ಹಾಗೂ ಇತರ ಎಚ್ಚರಿಕೆಗಳೊಂದಿಗೆ ನಿಖರವಾದ AdBlue ಬಳಕೆಯ ವರದಿಗಳನ್ನು ನೀಡುತ್ತದೆ.
  • ಕ್ಲೈಂಟ್‌ ಸೈಡ್‌ನಲ್ಲಿ ಯಾವುದೇ ಲೀಗೆಸಿ/ ERP ಸಿಸ್ಟಮ್‌ನೊಂದಿಗೆ ಸುಲಭ ಇಂಟಿಗ್ರೇಶನ್‌ಗಾಗಿ ಅಪ್ಲಿಕೇಶನ್‌ ಪ್ರೋಗ್ರಾಂ ಇಂಟರ್‌ಫೇಸ್‌ (API) ಲೈಬ್ರರಿ ಲಭ್ಯವಿರುತ್ತದೆ.
  • ವಾಹನಗಳ ಉನ್ನತ ರೆಸಲ್ಯೂಶನ್‌ ಟ್ರ್ಯಾಕಿಂಗ್‌ - ವಾಹನದಲ್ಲಿ ಎಂಬೆಡೆಡ್‌ ಡಿವೈಸ್‌, ಪ್ಲೇಬ್ಯಾಕ್‌ ಸಮಯದಲ್ಲಿ ನಕ್ಷೆಯಲ್ಲಿ ಪ್ರತಿ ಸೆಕೆಂಡ್‌ಗೆ ಪ್ಲಾಟ್‌ ಮಾಡಲಾದ ಡೇಟಾದೊಂದಿಗೆ ಪ್ರತಿ 10 ಸೆಕೆಂಡ್‌ಗಳಲ್ಲಿ ಸರ್ವರ್‌ಗೆ ಲೊಕೇಶನ್‌ ಡೇಟಾವನ್ನು ಕಳುಹಿಸುತ್ತದೆ. ಮಾರುಕಟ್ಟೆಯಲ್ಲಿರುವ ಬಹುತೇಕ ಪರಿಹಾರಗಳು 1 ನಿಮಿಷದ GPS ಡೇಟಾ ಆವರ್ತನದಲ್ಲಿ ಕಾರ್ಯ ನಿರ್ವಹಿಸುತ್ತದೆ!
  • ವಾಹನದಲ್ಲಿ ಲಭ್ಯವಿರುವ ಅನೇಕ ಸೆನ್ಸರ್‌ ಇನ್ಪುಟ್‌ಗಳಿಂದ ಡೇಟಾವನ್ನು ಸಂಪರ್ಕಿಸುವ ಹಾಗೂ ಪ್ರಸಾರ ಮಾಡುವ ಕ್ಷಮತೆಯೂ ಡಿವೈಸ್‌ನಲ್ಲಿ ಇದೆ. ಈ ಕ್ಷಮತೆಯು RMC, ರೀಫರ್‌ ಹಾಗೂ ಇತರ ಅಪ್ಲಿಕೇಶನ್‌ -ವಿಶಿಷ್ಟ ಡೇಟಾಕ್ಕಾಗಿ ಅತ್ಯಂತ ಉಪಯುಕ್ತವಾಗಿರುತ್ತದೆ, ಇದು ಟ್ರಾನ್ಸ್‌ಪೋರ್ಟರ್‌ಗಳ ದೊಡ್ಡ ವರ್ಗಕ್ಕಾಗಿ ಪ್ರಮುಖ ಆವಶ್ಯಕತೆಯಾಗಿರುತ್ತದೆ.
  • iMAXX ನ ಇತರ ಪ್ರಮುಖ ವೈಶಿಷ್ಟ್ಯಗಳು ಡ್ರೈವರ್‌ ಮ್ಯಾನೇಜ್‌ಮೆಂಟ್‌, ಟ್ರಿಪ್‌ ಮ್ಯಾನೇಜ್ಮೆಂಟ್‌ ಹಾಗೂ ಬಹು ಕಾರ್ಯಾಚರಣೆಗಳ ವರದಿಗಳನ್ನು ಒಳಗೊಂಡಿದೆ.

iMAXX ಗ್ರಾಹಕರು ತಮ್ಮ ವಾಹನಗಳನ್ನು ಬಳಸಿಕೊಳ್ಳುವ ರೀತಿಯಲ್ಲಿ ಕಾಂತಿಕಾರಿ ಬದಲಾವಣೆಯನ್ನು ಮಾಡುತ್ತದೆ. ಇದು ವಾಹನದ ಪರ್ಫಾರ್ಮೆನ್ಸ್‌, ಹೆಲ್ತ್ ಹಾಗೂ ವಿವಿಧ ನಿರ್ಣಾಯಕ ಮಾನದಂಡಗಳಲ್ಲಿ ಬಳಕೆಯನ್ನು ವಿಶ್ಲೇಷಿಸಲು ಸರಿಯಾದ ಮಾಹಿತಿಯನ್ನು ಒದಗಿಸುವ ಮೂಲಕ ಕಾರ್ಯಾಚರಣೆಯ ದಕ್ಷತೆ ಹಾಗೂ ಉತ್ಪಾದಕತೆಯನ್ನು ಗರಿಷ್ಠಗೊಳಿಸಲು ಸಶಕ್ತಗೊಳಿಸುತ್ತದೆ.