ಹೆವಿ ವಾಣಿಜ್ಯ ವಾಹನಗಳು/ಮಲ್ಟಿ-ಎಕ್ಸಲ್‌ ರಿಜಿಡ್‌ ಟ್ರಕ್‌ಗಳು

ಸಾಗಣೆ ವಿಭಾಗದ ಟ್ರಕ್‌ನ ಭಾರಕ್ಕೆ ಶಕ್ತಿಯ ಅನುಪಾತವು ಅತ್ಯಧಿಕವಾಗಿದೆ, ಅಂದರೆ ಪ್ರತಿ ಟ್ರಿಪ್ ಕನಿಷ್ಠ ಸಮಯವನ್ನು ತೆಗೆದುಕೊಳ್ಳುತ್ತದೆ. ಇತರ ಟ್ರಕ್‌ಗಳಿಗಿಂತಲೂ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲು ಒರಟಾದ ಸಮುಚ್ಚಯಗಳೊಂದಿಗೆ ನಿರ್ಮಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, Blazo X ಸೇವೆಯು ಆಜೇಯವಾಗಿರುತ್ತದೆ ಮತ್ತು HCV ಸಾಗಾಟ ವಿಭಾಗದಲ್ಲಿ ಇದನ್ನು ಅತ್ಯುತ್ತಮ ಆಯ್ಕೆಯನ್ನಾಗಿ ಮಾಡುತ್ತದೆ.

ವೈಶಿಷ್ಟ್ಯಗಳು & USP ಗಳು:

ಹೆಚ್ಚಿನ ಟ್ರಿಪ್‌ಗಳು, ಹೆಚ್ಚುವರಿ ಮೈಲೇಜ್:

BLAZO X ನ ದೃಢವಾದ ನಿರ್ಮಾಣವು ಶಕ್ತಿಯುತವಾದ ಡ್ರೈವ್‌ಲೈನ್‌ನಂತಹ ಉನ್ನತ ವೈಶಿಷ್ಟ್ಯಗಳೊಂದಿಗೆ ವರ್ಧಿಸುತ್ತದೆ ಮತ್ತು ತೂಕದ ಅನುಪಾತಕ್ಕೆ ಹೆಚ್ಚಿನ ಶಕ್ತಿಯೊಂದಿಗೆ ಸಾಟಿಯಿಲ್ಲದ ಇಂಧನ ದಕ್ಷತೆಯನ್ನೂ ನೀಡುತ್ತದೆ. ಜತೆಗೆ, FuelSmart ತಂತ್ರಜ್ಞಾನದೊಂದಿಗೆ ಉತ್ತಮ ಕಾರ್ಯಕ್ಷಮತೆಯೂ ಸಾಬೀತಾಗಿದೆ.

FuelSmart ಪ್ರಯೋಜನ:

ನೀವು ಸಿಮೆಂಟ್, ಆಹಾರ ಧಾನ್ಯಗಳು, ಕಲ್ಲಿನ ಇಟ್ಟಿಗೆಗಳು ಅಥವಾ ಹೆಪ್ಪುಗಟ್ಟಿಸಿದ ಆಹಾರವನ್ನು ತಲುಪಿಸುವ ವ್ಯವಹಾರದಲ್ಲಿದ್ದರೆ, ಪ್ರತಿ ಸಾರಿಗೆ ಉದ್ದೇಶಕ್ಕೆ ಸೂಕ್ತವಾದ ಟ್ರಕ್ ಅನ್ನು ಸಾಗಣೆ ವಿಭಾಗವು ಹೊಂದಿದೆ. ಬಳಸುವ ಟ್ರಕ್ ಯಾವುದೇ ಇರಲಿ, FuelSmart Advantage ಅನ್ನು ನೀವು ಸದಾ ಪಡೆಯುತ್ತೀರಿ.

mPOWER ಫ್ಯೂಲ್‌ಸ್ಮಾರ್ಟ್ ಎಂಜಿನ್, ಮಲ್ಟಿಮೋಡ್ ಸ್ವಿಚ್‌ಗಳ ಸಹಿತ:

Blazo X ಟ್ರಕ್‌ಗಳು mPOWER ಫ್ಯೂಲ್ಸ್‌ಮಾರ್ಟ್ ಎಂಜಿನ್ ಮಲ್ಟಿ-ಮೋಡ್ ಸ್ವಿಚ್‌ಗಳ ಸಂಯೋಜನೆಯನ್ನು ಹೊಂದಿದ್ದು, ರಾಜಿಯಾಗದ ಕಾರ್ಯಕ್ಷಮತೆಯನ್ನು ನೀಡುತ್ತವೆ. FuelSmart ಬಟನ್‌ಗಳು ನಿಮ್ಮ ವ್ಯಾಪಾರದ ಬೇಡಿಕೆಯಂತೆ, ಸಾಂದರ್ಭಿಕವಾಗಿ ಉತ್ತಮ ಮೈಲೇಜ್ ಮತ್ತು ಸಾಟಿಯಿಲ್ಲದ ಶಕ್ತಿಯ ನಡುವಿನ ಆಯ್ಕೆಗೆ ಅವಕಾಶ ನೀಡುತ್ತವೆ. FuelSmart ತಂತ್ರಜ್ಞಾನವು ಸರಳವಾಗಿದೆ, ಅತ್ಯುತ್ತಮವಾಗಿದೆ.

iMAXX ಟೆಲಿಮ್ಯಾಟಿಕ್ಸ್‌ ನಿಂದ ನಿಮ್ಮ ಲಾಭವನ್ನು ವೃದ್ಧಿಸಿಕೊಳ್ಳಿ:

ನಿಖರವಾದ ಮರುಪೂರಣಗಳು, ಲೈವ್ ಟ್ರ್ಯಾಕಿಂಗ್, ಮುನ್ಸೂಚಕ ವಾಹನದ ಸುಸ್ಥಿತಿಯ ಮೇಲ್ವಿಚಾರಣೆ, ಇಂಧನ ದಕ್ಷತೆಯ ವಿಶ್ಲೇಷಣೆ, ಕಳ್ಳತನದ ಎಚ್ಚರಿಕೆಗಳು, ಇಂಧನ ಬಳಕೆ, AdBlue ಮೇಲ್ವಿಚಾರಣೆ, ಚಾಲಕನ ನಡವಳಿಕೆಯ ಮೇಲ್ವಿಚಾರಣೆ ಮತ್ತು ಸ್ವಯಂಚಾಲಿತ ಕಾರ್ಯಾಚರಣೆಯ ವರದಿಗಳಂತಹ ಚತುರ ವೈಶಿಷ್ಟ್ಯಗಳನ್ನು iMAXX ಹೊಂದಿದೆ.

ಚಾಲಕ ಮಾಹಿತಿ ವ್ಯವಸ್ಥೆ:

Blazo X ನಲ್ಲಿರುವ ರಿಯಲ್-ಟೈಮ್ ಚಾಲಕ ಮಾಹಿತಿ ವ್ಯವಸ್ಥೆ (DIS)ಯು ಚಾಲಕನಿಗೆ ವಾಹನದ ನಿರ್ಣಾಯಕ ಮಾಹಿತಿಯನ್ನು ರಿಯಲ್-ಟೈಮ್‌ನಲ್ಲಿ ನೀಡುತ್ತದೆ. ಎಂಜಿನ್ r/min, ತಾಪಮಾನ, ವೇಗ ಮತ್ತು ಇಂಧನ ಮಟ್ಟಗಳ ಹೊರತಾಗಿ, ಇದು ಬ್ರೇಕ್ ಒತ್ತಡ, ಟ್ರಿಪ್ ಕಿ.ಮೀ., ಪ್ರತಿ ಕಿ.ಮೀ.ಗೆ ಡೀಸೆಲ್ ಬಳಕೆ, ಬ್ಯಾಟರಿ ವೋಲ್ಟೇಜ್, ಸರ್ವಿಸ್ ಜ್ಞಾಪನೆಗಳು ಮತ್ತು ಇತರ ಪ್ರಮುಖ ವಿವರಗಳನ್ನು ಇದು ಹೊಂದಿದೆ.

ಉತ್ತಮ ಉತ್ಪಾದಕತೆಗಾಗಿ ಸುಧಾರಿತ ಕ್ಯಾಬಿನ್

ಕ್ಯಾಬಿನ್ ಒಳಗೆ ಶ್ರಮವನ್ನು ಕಡಿಮೆ ಮಾಡಲು ಕ್ಯಾಬಿನ್‌ನ 4-ಬಿಂದುಗಳಲ್ಲಿ ದಕ್ಷತಾಶಾಸ್ತ್ರೀಯವಾಗಿ ಸಸ್ಪೆನ್ಶನ್ ಅಳವಡಿಸಿ, ನೆಲೆಗೊಳಿಸಿದ್ದು, ಉತ್ತಮ ಚಾಲನಾ ಸೌಕರ್ಯವನ್ನು ಹೆಚ್ಚಿಸುತ್ತದೆ. ಸುರಕ್ಷಿತ, ಆಯಾಸ-ಮುಕ್ತ ಚಾಲನೆಗಾಗಿ Blazo X ಅನ್ನು ನಿರ್ಮಿಸಲಾಗಿದೆ. ಇದರ ಅರ್ಥ, ಚಾಲಕರು ಕಡಿಮೆ ನಿಲುಗಡೆಗಳನ್ನು ತೆಗೆದುಕೊಳ್ಳುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ದೂರವನ್ನು ಕ್ರಮಿಸಬಹುದು.

FAQ ಗಳು

Mahindra ದ Haulage ವಿಭಾಗಗಳ Blazo X ಟ್ರಕ್‌ಗಳು 10R20-16 PR, ರೇಡಿಯಲ್ ಟೈರ್‌ಗಳು, 10+1 ಟೈರ್‌ಗಳೊಂದಿಗೆ ಬರುತ್ತವೆ.

HCV ವರ್ಗದ Mahindra Blazo ಒಂದು ಟ್ರೆಂಡಿಂಗ್ ಮಾಡೆಲ್ ಆಗಿದೆ: Haulage (ಹೌಲೇಜ್), Tipper (ಟಿಪ್ಪರ್) ಮತ್ತು ಟ್ರಾಕ್ಟರ್ ಟ್ರೈಲರ್ (Tractor Trailer) ವರ್ಗ. ಇದು 280 HP ಚಾಲಿತ mPower 7.2 ಲೀಟರ್ FuelSmart ಎಂಜಿನ್, ಹೆಚ್ಚಿನ ಟಾರ್ಕ್, ಕಡಿಮೆ r/min ಎಂಜಿನ್ ಹೊಂದಿದೆ. ಇದು 1050 NM ಅನ್ನು ಉತ್ಪಾದಿಸುತ್ತದೆ. ಹೆವಿ ಡ್ಯೂಟಿ ವಾಣಿಜ್ಯ ಟ್ರಕ್ 415 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

ಡಬಲ್ ಆಕ್ಸಲ್ ಟ್ರೈಲರ್ ಅನ್ನು ಟಂಡೆಮ್ ಆಕ್ಸಲ್ ಟ್ರೈಲರ್ ಎಂದೂ ಕರೆಯುತ್ತಾರೆ, ಇದು ಟೋ-ಬ್ಯಾಕ್ ಪ್ಲಾಟ್‌ಫಾರ್ಮ್ ಆಗಿದ್ದು, ನಾಲ್ಕು ಅಥವಾ ಹೆಚ್ಚಿನ ಚಕ್ರಗಳನ್ನು ಅಳವಡಿಸಿರುವ ಎರಡು ಆಕ್ಸಲ್‌ಗಳನ್ನು ಒಳಗೊಂಡಿದೆ. ವಾಹನದ ಹಿಂಭಾಗದಲ್ಲಿ ಭಾರವಾದ ಅಥವಾ ಬಹು ಸಂಖ್ಯೆಯ ವಸ್ತುಗಳನ್ನು ಸುರಕ್ಷಿತವಾಗಿ ಮತ್ತು ರಕ್ಷಣಾತ್ಮಕವಾಗಿ ಎಳೆದೊಯ್ಯಲು ಬಳಕೆದಾರರಿಗೆ ಅನುವು ಮಾಡಿಕೊಡುವುದು ಡಬಲ್ ಆಕ್ಸಲ್ ಟ್ರೈಲರ್‌ನ ಉದ್ದೇಶವಾಗಿದೆ.

ಭಾರೀ ವಾಣಿಜ್ಯ ವಾಹನಗಳು ವಾಣಿಜ್ಯ ವಾಹನಗಳ ವಲಯದ ವಿಶಾಲವಾದ ಮತ್ತು ಭಾರೀ ಶ್ರೇಣಿಯ ವಿಭಾಗವಾಗಿದೆ. HCV ಶ್ರೇಣಿಯು 18.5T ಯಿಂದ ಪ್ರಾರಂಭವಾಗಿ 55T GVW ವರೆಗೆ ಇದ್ದು, ಮಲ್ಟಿ-ಆಕ್ಸಲ್, ಹೌಲೇಜ್, ಟ್ರಾಕ್ಟರ್-ಟ್ರೇಲರ್, ಮತ್ತು ಟಿಪ್ಪರ್ ಇವುಗಳನ್ನು ಒಳಗೊಂಡಿದೆ.

Mahindra Blazo X 46 ಟ್ರಾಕ್ಟರ್ ಪ್ಲಸ್. ತಡೆರಹಿತ ಕೆಲಸಕ್ಕಾಗಿ mPower 7.2 ಲೀಟರ್ FuelSmart ಎಂಜಿನ್ ಒದಗಿಸಲಾಗಿದೆ. ಹೆಚ್ಚುವರಿಯಾಗಿ, ಹೆವಿ-ಡ್ಯೂಟಿ ವಾಣಿಜ್ಯ ಟ್ರಕ್ ಭಾರವಾದ ಪೇಲೋಡ್‌ಗಳನ್ನು ಸಾಗಿಸಲು ಸಹಾಯ ಮಾಡುವುದಕ್ಕಾಗಿ ಮಲ್ಟಿ-ಆಕ್ಸಲ್‌ಗಳು ಮತ್ತು ಉನ್ನತ-ದರ್ಜೆಯ ತಂತ್ರಜ್ಞಾನವನ್ನು ಹೊಂದಿದೆ. ಜತೆಗೆ, ಭಾರತದ ವಿವಿಧ ಭೂಪ್ರದೇಶಗಳ ಮೂಲಕ ಚಾಲನೆ ಮಾಡುವಾಗ ಚಾಲಕನಿಗೆ ಉತ್ತಮ ಪ್ರಮಾಣದ ಸೌಕರ್ಯವನ್ನು ಒದಗಿಸುತ್ತದೆ.