ಆಟೋ ಎಕ್ಸ್‌ಪೋ 2010

10ನೇ ಆಟೋ ಎಕ್ಸ್‌ಪೋದಲ್ಲಿ ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ TRACO 49 ಹಾಗೂ TRACO 40 ಟ್ರಕ್‌ಗಳ ಅನಾವರಣ

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ (M&M)ದ ವಾಣಿಜ್ಯ ವಾಹನದ ಉದ್ಯಮವಾದ ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ ಹೊಸದಿಲ್ಲಿಯಲ್ಲಿ ಆಯೋಜಿಸಲಾದ 10ನೇ ವಾರ್ಷಿಕ ಆಟೋ ಎಕ್ಸ್‌ಪೋದಲ್ಲಿ ಭಾರತೀಯ ಮಾರ್ಕೆಟ್‌ಗಾಗಿ ಅದರ TRACO 49 ಹಾಗೂ TRACO 40 ಟ್ರಕ್‌ಗಳನ್ನು ಅನಾವರಣಗೊಳಿಸಿತು.

ಈ ಟ್ರಕ್‌ಗಳು ನಿಜವಾಗಿಯೂ ಹೈ ಪರ್ಫಾರ್ಮೆನ್ಸ್‌ ಮಶಿನ್‌ಗಳಾಗಿವೆ, ಬೇಡಿಕೆಯಿರುವ ಭಾರತೀಯ ಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ, ಅಭಿವೃದ್ಧಿಪಡಿಸಲಾಗಿದೆ ಹಾಗೂ ಪರೀಕ್ಷಿಸಲಾಗಿದೆ. ಇದು ಕ್ರಾಂತಿಕಾರಿ m-POWER ಎಂಜಿನ್‌ನಿಂದ ಚಾಲಿತವಾಗಿದೆ, ಪವರ್‌ ಹಾಗೂ ಇಂಧನ ದಕ್ಷತೆಗಾಗಿ ಸಾಬೀತಾದ ಕಾರ್ಯಕ್ಷಮತೆ, ವಿಶಾಲವಾದ, ದಕ್ಷತಾಶಾಸ್ತ್ರೀಯ ವಿನ್ಯಾಸವು ಉತ್ತಮ ಪವರ್‌ ತೂಕದ ಅನುಪಾತ ಹಾಗೂ ಹೆಚ್ಚಿನ ಪೇಲೋಡ್‌ ಕ್ಷಮತೆಗಳೊಂದಿಗೆ ಸರಕುಗಳನ್ನು ವೇಗವಾಗಿ ತಲುಪಿಸುವ ಕಾರ್ಯಕ್ಕೆ ಅವುಗಳನ್ನು ಸೂಕ್ತ ಆಯ್ಕೆಯನ್ನಾಗಿಸಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ನ ಉಪಾಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆನಂದ್‌ ಮಹೀಂದ್ರಾರವರು ಹರ್ಷ ವ್ಯಕ್ತಪಡಿಸಿ, - ತಮ್ಮ ಪ್ರಾಡಕ್ಟ್‌ ಪೋರ್ಟ್‌ಫೋಲಿಯೋಕ್ಕೆ ‘TRACO 49 ಹಾಗೂ TRACO 40ಯ ಸೇರಿಕೆಯೊಂದಿಗೆ, ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ ಭಾರತೀಯ ಹೆವಿ ಕಮರ್ಷಿಯಲ್‌ ವಾಹನದ ಉದ್ಯಮದಲ್ಲಿ ವ್ಯಾಪಕ ಶ್ರೇಣಿಯ ಅಗತ್ಯಗಳನ್ನು ಪೂರೈಸಲು ಸಿದ್ಧವಾಗಿದೆ. ಈ ಉತ್ಪನ್ನ ಶ್ರೇಣಿಯು ಭಾರತದಲ್ಲಿ ವಾಣಿಜ್ಯ ವಾಹನ ಉದ್ಯಮದಲ್ಲಿ ನಮ್ಮನ್ನು ಒಂದು ವಿಶ್ವಾಸಾರ್ಹ ಕಂಪನಿಯನ್ನಾಗಿ ಮಾಡುತ್ತದೆ’’ ಎಂದರು.

Image

ಆಟೋ ಎಕ್ಸ್ಪೋ 2018

ಮಹೀಂದ್ರಾ ತನ್ನ ವಾಣಿಜ್ಯ ಶ್ರೇಣಿಯನ್ನು ಪ್ರದರ್ಶಿಸಿದೆ... ಮತ್ತಷ್ಟು ಓದು

Image

ಆಟೋ ಎಕ್ಸ್ 2017

2017 ಆಟೋ ಎಕ್ಸ್‌ಪೋದಲ್ಲಿ ಮಹೀಂದ್ರಾ ತನ್ನ ವಾಣಿಜ್ಯ ವಾಹನಗಳ ಶ್ರೇಣಿಯನ್ನು ಪ್ರದರ್ಶಿಸಿದೆ.

Image

ಆಟೋ ಎಕ್ಸ್ 2016

2016 ರ ಆಟೋ ಎಕ್ಸ್‌ಪೋದಲ್ಲಿ ಮಹೀಂದ್ರಾ ತನ್ನ ವಾಣಿಜ್ಯ ವಾಹನಗಳ ಶ್ರೇಣಿಯನ್ನು ಪ್ರದರ್ಶಿಸಿದೆ.

ಕಾರ್ಪೊರೇಟ್ ವಿಳಾಸ

ನೋಂದಾಯಿತ ಪ್ರಧಾನ ಕಛೇರಿ

ಮಹೀಂದ್ರ & ಮಹೀಂದ್ರ ಲಿ.

ಮಹೀಂದ್ರಾ ಟವರ್, 5th ಮಹಡಿ, ವಿಂಗ್ 4 ಪ್ಲಾಟ್ ನಂ. A/1, ಚಕನ್ ಇಂಡಸ್ಟ್ರಿಯಲ್ ಏರಿಯಾ ಹಂತ IV, ಪೋಸ್ಟ್ - ನಿಘೋಜೆ ಚಕನ್, ತಾಲ್ ಖೇಡ್, ಜಿಲ್ಲೆ. - ಪುಣೆ, ಮಹಾರಾಷ್ಟ್ರ ಪಿನ್ 410 501.

ದೂರವಾಣಿ

022- 6652 6000
1800 200 3600 (ಶುಲ್ಕರಹಿತ)

ಇಮೇಲ್

[email protected]